ಸಾಯಿಖೋಮ್ ಮೀರಾಬಾಯಿ ಚಾನು (ಜನನ 8 ಆಗಸ್ಟ್ 1994) ಒಬ್ಬ ಭಾರತೀಯ ವೇಟ್‌ಲಿಫ್ಟರ್ . ಮಹಿಳೆಯರ 49 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು, ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟರು. 48 ಕೆ.ಜಿ ವಿಭಾಗದಲ್ಲಿ 2014 ರಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. 48 ಕೆಜಿ ವಿಭಾಗದಲ್ಲಿ, ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತು ವಿಶ್ವ ಚಾಂಪಿಯನ್‌ಶಿಪ್ ಗಳಲ್ಲಿ ಮತ್ತು ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಕ್ರೀಡೆಯಲ್ಲಿ ಅವರು ನೀಡಿದ ಕೊಡುಗೆಗಳಿಗಾಗಿ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ನೀಡಲಾಯಿತು. ಅವರಿಗೆ 2018 ರಲ್ಲಿ ಭಾರತ ಸರ್ಕಾರದಿಂದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ. ಗ್ಲ್ಯಾಸ್ಗೋದ 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಾನು ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು; ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿಹಲವು ವಿಶ್ವದಾಖಲೆಗಳನ್ನು ಸ್ಥಾಪಿಸಿದ್ದರು. ಯುನೈಟೆಡ್ ಸ್ಟೇಟ್ಸ್ನ ಅನಾಹೈಮ್ನಲ್ಲಿ 2017 ರಲ್ಲಿ ನಡೆದ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದರು. == ಆರಂಭಿಕ ಜೀವನ == ಆಗಸ್ಟ್ 1994 8 ರಂದು ನಾಂಗ್ಪಾಂಕ್ ಕಕ್ಚಿಂಗ್ ಇಂಫಾಲ, ಮಣಿಪುರ, ದಲ್ಲಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಆಕೆಯ ಕುಟುಂಬವು ಚಿಕ್ಕಂದಿನಿಂದಲೇ ಅವಳ ಶಕ್ತಿಯನ್ನು ಗುರುತಿಸಿತು. ಅವಳು ಸುಲಭವಾಗಿ ತನ್ನ ಮನೆಗೆ ದೊಡ್ಡ ಕಟ್ಟಿಗೆಯ ಹೊರೆಗಳನ್ನು ಕೊಂಡೊಯ್ಯುತ್ತಿದ್ದಳು, ಅದನ್ನು ಅವಳ ಅಣ್ಣ ತೆಗೆದುಕೊಳ್ಳಲು ಸಹ ಕಷ್ಟವಾಯಿತು. == ಕ್ರೀಡಾಕೂಟಗಳು == ಕಾಮನ್‌ವೆಲ್ತ್ ಕ್ರೀಡಾಕೂಟದ ಗ್ಲ್ಯಾಸ್ಗೋ ಆವೃತ್ತಿಯಲ್ಲಿ ಚಾನು ಅವರ ಮೊದಲ ಬಾರಿಗೆ ಬೆಳಕಿಗೆ ಬಂದರು; ಅವರು 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. 48 ಕೆ.ಜಿ ಮಹಿಳೆಯರ ವಿಭಾಗದಲ್ಲಿ ಚಾನು 2016 ರ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದರು. ತನ್ನ ಮೂರು ಪ್ರಯತ್ನಗಳಲ್ಲಿ ಯಾವುದೇ ಯಶಸ್ವಿ ಲಿಫ್ಟ್ಗಳಿಲ್ಲದ ಕಾರಣ ಒಲಂಪಿಕ್ ನಲ್ಲಿ ವಿಫಲರಾದರು. 2017 ರಲ್ಲಿ ಅಮೆರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ದಾಖಲೆಯ 194 ಕೆ.ಜಿ ಎತ್ತುವ ಮೂಲಕ 48 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. 2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಾನು 196 ಕೆಜಿ ಎತ್ತಿ (86 ಕೆಜಿ ಸ್ನ್ಯಾಚ್‌ನಲ್ಲಿ ಕೆಜಿ ಮತ್ತು 110 ಕೆಜಿ ಕ್ಲೀನ್ ಮತ್ತು ಜರ್ಕ್ನಲ್ಲಿ) ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು 2019 ರ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಸ್ನ್ಯಾಚ್ನಲ್ಲಿ 86 ಕೆಜಿ ಎತ್ತಿ, ಕ್ಲೀನ್ ಮತ್ತು ಜರ್ಕ್ನಲ್ಲಿ 113 ಕೆಜಿ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದರು. 2020 ರ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 205 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಮತ್ತು ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದರು.2019 ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಒಟ್ಟು 201 ಕಿ.ಗ್ರಾಂ (87 ಕಿ.ಗ್ರಾಂ ಸ್ನ್ಯಾಚ್ ಮತ್ತು 114 ಕಿ.ಗ್ರಾಂ ಕ್ಲೀನ್ & ಜರ್ಕ್) ಎತ್ತಿ 4 ನೇ ಸ್ಥಾನ ಗಳಿಸಿದರು . ಈ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವು 49 ಕೆಜಿ ವಿಭಾಗದಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿದೆ. ನಾಲ್ಕು ತಿಂಗಳ ನಂತರ ಅವರು 49 ಕಿ.ಗ್ರಾಂ ವಿಭಾಗದಲ್ಲಿ 203 ಕಿ.ಗ್ರಾಂ (ಸ್ನ್ಯಾಚ್‌ನಲ್ಲಿ 88 ಕಿ.ಗ್ರಾಂ ಮತ್ತು ಕ್ಲೀನ್ & ಜರ್ಕ್‌ನಲ್ಲಿ 115 ಕಿ.ಗ್ರಾಂ) ಎತ್ತಿ2020 ರ ಹಿರಿಯ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರು. == 2021 ಟೋಕಿಯೋ ಒಲಂಪಿಕ್ಸ್ == 2021 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 202 ಕೆಜಿ ಎತ್ತುವ ಮೂಲಕ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲನೇ ಭಾರತೀಯ ವೇಟ್‌ಲಿಫ್ಟರ್ ಎನಿಸಿಕೊಂಡರು, ಮಹಿಳಾ 49 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ ತೂಕವನ್ನು ಎತ್ತುವಲ್ಲಿ ಚಾನು ಯಶಸ್ವಿಯಾದರು, ಕರ್ಣಂ ಮಲ್ಲೇಶ್ವರಿ (2000 ಸಿಡ್ನಿ ಒಲಂಪಿಕ್ಸ್ ಕಂಚಿನ ಪದಕ) ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್ ಎನಿಸಿಕೊಂಡರು. ದಾಖಲೆಯನ್ನು 115 ಕಿ.ಗ್ರಾಂ ಕ್ಲೀನ್ ಮತ್ತು ಜರ್ಕ್‌ನಲ್ಲಿ ಯಶಸ್ವಿಯಾಗಿ ಎತ್ತುವ ಮೂಲಕ ಮೀರಾಬಾಯಿ ಚಾನು ಹೊಸ ಒಲಂಪಿಕ್ ದಾಖಲೆಯನ್ನು ನಿರ್ಮಿಸಿದ್ದಾರೆ. ಬೆಳ್ಳಿ ಪದಕವನ್ನುಗೆದ್ದ ಚಾನು ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, "ಭಾರತವು ಸಂತೋಷದಾಯಕ ಆರಂಭ ಮತ್ತು ಅದ್ಭುತ ಪ್ರದರ್ಶನದಿಂದ ಉಲ್ಲಾಸಗೊಂಡಿದೆ" ಎಂದು ಹೇಳಿದ್ದಾರೆ. == ಪ್ರಶಸ್ತಿಗಳು == ಚಾನು ಅವರಿಗೆ ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ₹ 2 ಮಿಲಿಯನ್ ನಗದು ಬಹುಮಾನವನ್ನು ಘೋಷಿಸಿದ್ದರು. 2018 ರ ಭಾರತದ ಅತ್ಯುನ್ನತ ನಾಗರಿಕ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನವನ್ನು 2018 ರಲ್ಲಿ ಚಾನು ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ನೀಡಲಾಯಿತು. 2019 ರಲ್ಲಿ, ಅವರು 194 ಕೆಜಿ ಎತ್ತಿದ ನಂತರ ಕತಾರ್ ಅಂತರರಾಷ್ಟ್ರೀಯ ಕಪ್‌ನಲ್ಲಿ ಚಿನ್ನ ಗೆದ್ದರು. . == ಉಲ್ಲೇಖಗಳು ==